About Us
ಇಂಡಿಯನ್ ಸೈಬರ್ ಕೆಫೆ ಯ ಹೊಸ ವೆಬ್ ಸೈಟ್ ಗೆ ನಿಮಗೆ ಸ್ವಾಗತ, ಸಾರ್ವಜನಿಕರಿಗೆ ಸಕಾಲಕ್ಕೆ ಅಗತ್ಯ ಸೇವೆಗಳನ್ನು ನೀಡುವುದರ ಮೂಲಕ ಮನೆಮಾತಾಗಿರುವ ಇಂಡಿಯನ್ ಸೈಬರ್ ಕೆಫೆಯಲ್ಲಿ ತನ್ನ ಸೇವೆಗಳನ್ನು ಇನ್ನೂ ಹಲವರಿಗೆ ತಲುಪಿಸುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಸೇವೆಯನ್ನು ಈ ವೆಬ್ ಸೈಟ್ ಮೂಲಕ ಪ್ರಾರಂಭಿಸುತ್ತಿದ್ದೇವೆ.
ನಮ್ಮ ಸೈಬರ್ ಕೆಫೆಯು ಅನೇಕ ವರ್ಷಗಳಿಂದ ಸಾರ್ವಜನಿಕರ ಸೇವೆಯಲ್ಲಿ ತೊಡಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಅನೇಕ ಯೋಜನೆಗಳನ್ನು ಸಕಾಲಕ್ಕೆ ಸಾರ್ವಜನಿಕರಿಗೆ ತಿಳಿಸುವುದು ಹಾಗೂ ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಕೆಲಸವಾಗಿದೆ.
ಅದೇ ರೀತಿ ವಿದ್ಯಾರ್ಥಿಗಳಿಗೆ ಕಾಲ ಕಾಲಕ್ಕೆ ಸಿಗುವ ಸ್ಕಾಲರ್ ಶಿಪ್ ಗಳ ಮಾಹಿತಿ, ರೈತರಿಗೆ ಹಾಗೂ ಉದ್ಯಮಿಗಳಿಗೆ ಅನುಕೂಲವಾಗಬಲ್ಲ ಅನೇಕ ಸೇವೆಗಳನ್ನು ನೀಡುತ್ತಾ ಬಂದಿರುತ್ತೇವೆ.
ಈ ವೆಬ್ ಸೈಟ್ ನ ಮೂಲಕ ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳು CCC Registration ಮಾಡಿಕೊಳ್ಳುವ ಮೂಲಕ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದ್ದೇವೆ.
CCC Registration ಮಾಡಿಕೊಂಡಲ್ಲಿ ನಮ್ಮ ಸೈಬರ್ ಕೆಫೆಯಿಂದ ನೀಡಲಾಗುವ ಅನೇಕ ಸೇವೆಗಳನ್ನು ನಿಮ್ಮ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.
Call To Action
ನಮ್ಮ ಈ ವೆಬ್ ಸೈಟ್ ನಿಂದ ಅನೇಕರು ಸದುಪಯೋಗ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ರೀತಿಯ ಸೇವೆ ನಮ್ಮಿಂದ ಬೇಕಾದಲ್ಲಿ ಅಥವಾ ನಿಮ್ಮ ಯಾವುದೇ ರೀತಿಯ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬೇಕೆಂದಿದ್ದಲ್ಲಿ ಹಾಗೂ ನಿಮ್ಮ ಪರಿಚಿತರು ನಮ್ಮಲ್ಲಿ ಯಾವುದೇ ರೀತಿಯ ಉದ್ಯೋಗದ ಮಾಹಿತಿಯನ್ನು ಪಡೆಯಬೇಕಾದಲ್ಲಿ ನಮಗೆ ಈ ಕೆಳಗಿನ ಈ ಮೇಲ್ ಬಾಕ್ಸ್ ನಲ್ಲಿ ಮಾಹಿತಿಯನ್ನು ನೀಡಲು ಕೋರಲಾಗಿದೆ.
Testimonials
ಸುದರ್ಶನ್
ವಿದ್ಯಾರ್ಥಿ, ಸರ್ಕಾರಿ ಪದವಿಪೂರ್ವ ಕಾಲೇಜುಸೈಬರ್ ಕೆಫೆಯಲ್ಲಿ ಸಕಾಲಕ್ಕೆ ಆನ್ ಲೈನ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿದ ಕಾರಣ ನನಗೆ ಸ್ಕಾಲರ್ ಶಿಪ್ ದೊರಕಿದೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ನಾನು ಹಾಗೂ ನನ್ನ ಸ್ನೇಹಿತರು ಎಲ್ಲಾ ರೀತಿಯ ಆನ್ ಲೈನ್ ಸೇವೆಗಳನ್ನು ಇವರಿಂದ ಪಡೆದುಕೊಳ್ಳುತ್ತೇವೆ. ಸೈಬರ್ ಕೆಫೆ ಮಾಲೀಕರಿಗೆ ಅನಂತ ನಮಸ್ಕಾರಗಳು.
ಅಶ್ವಿನಿ
ಉದ್ಯೋಗಾಕಾಂಕ್ಷಿಕಾಲ ಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಲು ಇವರ ವೆಬ್ ಸೈಟ್ ನನಗೆ ಬಹಳ ಅನುಕೂಲವಾಗಿದೆ. CCC Registration ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ನನಗೆ ಮನೆಯಲ್ಲಿಯೇ ಕುಳಿತು ಆನ್ ಲೈನ್ ಅರ್ಜಿ ಸಲ್ಲಿಸಲು ಸೈಬರ್ ಕೆಫೆಯ ಮಾಲೀಕರು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ನನ್ನ ಸಮಯ ಹಾಗೂ ಆನ್ ಲೈನ್ ಸೆಂಟರ್ ಗಳಿಗೆ ಅಲೆದಾಟ ತಪ್ಪಿದಂತಾಗಿದೆ. ಧನ್ಯವಾದಗಳು
ಸುಮನಾ ಶಶಿಧರ್
ಸೀನಿಯರ್ ಎಕ್ಸಿಕ್ಯೂಟಿವ್, ಲಾರ್ಡ್ ಬೆನ್ಸ್ ನ್ ಕಂಪನಿ,CCC Registration ಮಾಡಿಕೊಂಡು ಆನ್ ಲೈನ್ ಅರ್ಜಿ ಸಲ್ಲಿಸಿದ ಕಾರಣ ನನಗೆ ಅತ್ಯುತ್ತಮ ಕಂಪನಿಯಲ್ಲಿ ಕೆಲಸ ದೊರಕಿದಂತಾಗಿದೆ. ಇವರ ಈ ವೆಬ್ ಸೈಟ್ ನಿಂದ ನಾನು ನನ್ನ ಕನಸಿನ ಜಾಬ್ ಪಡೆಯಲು ಅನುಕೂಲವಾಗಿದೆ. ಸಂಚಾರ ವ್ಯವಸ್ಥೆಯಿಲ್ಲದ ಹಳ್ಳಿಯಿಂದ ಬರುವ ನಾನು ಯಾವುದೇ ಆನ್ ಲೈನ್ ಸೆಂಟರ್ ಗೆ ಹೋಗಲು 10 ಕಿ.ಮೀ ದೂರದಿಂದ ಓಡಾಡುವ ಪರಿಸ್ಥಿತಿ ಇತ್ತು. ಆದರೆ ಇಂದು ಈ ವೆಬ್ ಸೈಟ್ ಬಳಸಿ ಅರ್ಜಿ ಸಲ್ಲಿಸಿದ ನಂತರ ಅತ್ಯುತ್ತಮ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ. ಟೆಕ್ನಾಲಜಿಯನ್ನು ಹಳ್ಳಿ ಯ ವಿದ್ಯಾರ್ಥಿಗಳಿಗೆ ಬಳಸಲು ಅನುಕೂಲ ಮಾಡಿಕೊಟ್ಟ ಸೈಬರ್ ಮಾಲೀಕರಿಗೆ ಧನ್ಯವಾದಗಳು